Thursday 5 March 2015

ಬಣ್ಣ



ಬಣ್ಣಗಳ ಯುದ್ಧ
ಬಣ್ಣ ಬಣ್ಣಗಳ ನಡುವೆ ಹೋರಾಟ,
ಕೇಸರಿ ಬಿಳಿ ಹಸಿರು
ಬಣ್ಣ ಬಣ್ಣಗಳ ನಡುವೆ ಹೋರಾಟ,

ಬಣ್ಣಗಳೇ  ಬಣ ಕಟ್ಟಿವೆ
ಕಲೆತು ತನು ತಟ್ಟದೆ…
ಪ್ರತಿ  ಬಣ್ಣಕ್ಕೊಂದು ಸಂಕೇತ
ಪ್ರತಿ  ಬಣ್ಣಕ್ಕೊಂದು  ಕ್ರತಿ
ಪ್ರತಿ  ಕ್ರತಿಗೊಂದು  ಬಣ್ಣ
ಪ್ರತಿ  ಮಾತಿಗೊಂದು  ಬಣ್ಣ
ಭೂತ ಭವಿಷ್ಯ ಎಲ್ಲಕ್ಕೂ ಒಂದು ಬಣ್ಣ
ಬಣ್ಣಕ್ಕೂ ಒಂದು ಪ್ರತಿ ಬಣ್ಣ
ಬಣ್ಣಗಳಿಗೊಂದು ಧರ್ಮ
ಬಣ್ಣ ಬಳಿವವನ ಕರ್ಮ
ಜನ ಮರೆತೋಗಿದೆ ಸಹಜ ಮನೋಧರ್ಮ

ಧುರಾಸೆ ಬಣ್ಣಗಳಿಗೆ
ಜಗವೆಲ್ಲ ಪಸರಿಸುವ ಬಯಕೆ
ಎಲ್ಲಾ ಮುಖಗಳಿಗೂ ತನ್ನದೇ ಬಣ್ಣ ಬಳಿವಾಸೆ
ಅದೂ ಹಳೇ ಬೇರೆ ಬಣ್ಣಗಳ
ಅಳಿಸಿ ಬಳಿವಾಸೆ...

ಈ ಬಣ್ಣಗಳ ಹೋರಾಟದಿ
ಎಲ್ಲಾ ಕೆಂಪಾಗಿವೆ ... ರಕ್ತ !
ಹಸಿರು ಮುಸಿರಾಗಿದೆ
ಕೇಸರಿ ಕೇಸರಾಗಿದೆ
ಬಿಳಿ ಕರಿಯಾಗಿದೆ
ಕರಿ ಕಳೆದೋಗಿದೆ
ಮನ ಬರಿದಾಗಿದೆ
ಕಲಾವಿದನ ಕುಂಚ ನಡುಗುತ್ತಿದೆ
ಅಚ್ಚು ಮಾಸಿದ ಬಣ್ಣಗಳೇ
ಬೇರೆ ಬೇರೆ ಗುಂಪು ಕಟ್ಟಿಹೊಡೆದಾಡುತ್ತಿದೆ
ಪಸರಿಸೋ ಬರದಲ್ಲಿ
ತನ್ನತನವನ್ನೆ ಕಳೆದುಕೊಳ್ಳುತ್ತಿರುವುದು ಅರಿಯದಾಗಿದೆ

ಅವನೋ ಕಲೆಗಾರ
ಸುಮ್ಮನಿದ್ದಾನೆ
ನಿಷ್ಕಲ್ಮಸ ಸಾಗರದಿ ಕೊಂಚ ಬಣ್ಣಗಳ ಸುರಿದು
ಬಿಡಿಸೋ ಚಿತ್ರವ ಮರೆತು ಬಿಟ್ಟಿದ್ದಾನೆ
ಸುಮ್ಮನೆ ಮುಗುಳ್ನಗುತ್ತಾ ನೋಡುತ್ತಿದ್ದಾನೆ
ಅವನಿಗೆ ಗೊತ್ತು
ಮುಂದೊಂದು ದಿನ
ಇರುವುದು ಒಂದೇ ಬಣ್ಣ
ಸಹಜ ಮನುಜ ಬಣ್ಣ...
                             ...Jagadish Naik....

Wednesday 22 January 2014

ದ್ವಂದ್ವ ಮನದ ಚೆಂದದ ಕವನಗಳು

ಕವಿಯಾದoತೆ ಅನಿಸಿ
ಸುಮ್ಮನೆ ಸಾಲುಗಳು ಬರುತ್ತಿದ್ದವು
 ಅವಳು ಆಚೆ ಹೋದಾಗ,
ಈಗ ನಿಂತಿವೆ ಇವಳು ಬಂದಾಗ,
ಕಳವಳದ ಪ್ರಶ್ನೆ ಏನೆಂದರೆ
 ಚೂರೂ ಕಳಕಳಿ ಇಲ್ಲಾ ಎನಗೆ,

ಎನ್ನ ಚೂರಾದ ಹೃದ್ದಯದ ಮೇಲೇ.... ...jaxalone...